Coding ಎಂದರೇನು ? coding meaning in Kannada, coding hege kaliayabahudu?, what is coding in Kannada ?
ಸ್ನೇಹಿತರೇ, ನೀವು ಖಂಡಿತವಾಗಿಯೂ ಸ್ಮಾರ್ಟ್ಫೋನ್ ಹೊಂದಿರುತ್ತೀರಿ ಅಲ್ಲವೇ?
ನೀವು ಅದರಲ್ಲಿರುವ ಎಲ್ಲ ಅಪ್ಪ್ಲಿಕೆಶನ್ಸ್ ಸಹ ಉಪಯೋಗಿಸುತ್ತೀರಿ.
ಹಲವು ವೆಬ್ಸೈಟ್ಗಳನ್ನು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ನೋಡಿರುತ್ತೀರಿ.
ಆದರೆ , ಈ ವೆಬ್ಸೈಟ್ಗಳು (websites) ಮತ್ತು ಅಪ್ಪ್ಲಿಕೆಶನ್ಗಳನ್ನು (Applications) ಹೇಗೆ ತಯಾರಿಸಲಾಗುತ್ತದೆ ಎಂದು ನಿಮಗೆ ಗೊತ್ತಾ ?
ಅವುಗಳನ್ನು coding ಮೂಲಕ ಅಭಿವೃದ್ಧಿಗಳಿಸಲಾಗುತ್ತದೆ., ಅದನ್ನು ಒಬ್ಬ ಡೆವಲಪರ್ ಅರ್ಥಮಾಡಿಕೊಳ್ಳಬಹುದು.. ಮತ್ತು ಅದನ್ನು ತಯಾರು (ಡೆವೆಲೆಪ್ )ಮಾಡಬಹುದು.
ಕಂಪ್ಯೂಟರ್ ಪ್ರೋಗ್ರಾಂಗಳು (ಕೋಡಿಂಗ್), ಮೊಬೈಲ್ ಅಪ್ಲಿಕೇಶನ್ಗಳು, ವೆಬ್ಸೈಟ್ಗಳು, ಆಟಗಳು ಅಥವಾ ಸಾಫ್ಟ್ವೇರ್ಗಳಲ್ಲಿ ಏನನ್ನಾದರೂ ಕಲಿಯಲು ಮತ್ತು ಮಾಡಲು ನಿಮಗೆ ಅದರಲ್ಲಿ ಏನಾದರೂ ಸಾಧಿಸಬೇಕು ಅಂತ ಆಸಕ್ತಿ ಇದ್ದರೆ, ಮೊದಲು ನೀವು ಪ್ರೋಗ್ರಾಮಿಂಗ್ ಕಲಿಯಬೇಕು. ಪ್ರೋಗ್ರಾಮಿಂಗ್ ಭಾಷೆಯನ್ನು (ಲ್ಯಾಂಗ್ವೇಜ್ ) ಬಳಸಿಕೊಂಡು ಸಾಫ್ಟ್ವೆರ್ ಗಳನ್ನು ತಯಾರು ಮಾಡುತ್ತೇವೆ.
ನಮ್ಮ ಎಲ್ಲಾ ಕಂಪ್ಯೂಟರ್ಗಳು, ಮೊಬೈಲ್ಗಳು ಮತ್ತು ನಾವು ಬಳಸುವ ಎಲ್ಲಾ ಸ್ಮಾರ್ಟ್ ಸಾಧನಗಳಲ್ಲಿ ಪ್ರೋಗ್ರಾಮಿಂಗ್ (programming) ಅನ್ನು ಬಳಸಲಾಗುತ್ತದೆ. ಕೋಡಿಂಗ್ ಅಥವಾ ಪ್ರೋಗ್ರಾಮಿಂಗ್ ಇಲ್ಲದೇ ಯಾವ ಅಪ್ಲಿಕೇಶನ್ ಮಾಡಲು ಸಾಧ್ಯವಿಲ್ಲ.
ಈಗ ಸ್ಮಾರ್ಟ್ ಯುಗ. ಒಂದು ಉದಾಹರಣೆ ಹೇಳಬೇಕೆಂದರೆ ಹಿಂದಿನ ದಿನಗಳಲ್ಲಿ ನಾವು ಬ್ಯಾಂಕಿಗೆ ಸ್ವತಃ ಹೋಗಿ ಹಣವನ್ನು ತೆಗೆದುಕೊಳ್ಳಬೇಕಾಗಿತ್ತು, ನಂತರ ನಾವು ಎಟಿಎಂನಿಂದ ಹಣವನ್ನು ತೆಗೆಯಲು ಪ್ರಾರಂಭಿಸಿದೆವು.
ಈಗ ನಾವು ಮನೆಯಲ್ಲಿಯೇ ಕುಳಿತು ಯಾವಾಗ ಬೇಕಾದರೂ ಆನ್ಲೈನ್ನಲ್ಲಿ ಹಣವನ್ನು ವರ್ಗಾಯಿಸಬಹುದು . ಇದರಿಂದ ನಮ್ಮ ಸಮಯ ಉಳಿತಾಯ ಆಗುತ್ತದೆ. ಹೆಚ್ಚು ಶ್ರಮ ಬೇಕಾಗಿಲ್ಲ.
ಆದ್ದರಿಂದ ಇನ್ನು ಮುಂದೆ coding ಎಂದರೇನು ಮತ್ತು ಅದರಿಂದ ನೀವು ಹೇಗೆ ಕಲಿಯಬಹುದು ಎಂಬುದನ್ನು ನಿಮಗೆ ನಾವು ತಿಳಿಸುಕೊಡುತ್ತೇವೆ .
ಕೋಡಿಂಗ್ ಎಂದರೇನು? (What is coding)
ಕೋಡಿಂಗ್ ಅನ್ನು ಪ್ರೋಗ್ರಾಮಿಂಗ್ ಎಂದೂ ಕರೆಯುತ್ತಾರೆ. ನಾವು ಕಂಪ್ಯೂಟರಿನಲ್ಲಿ ಏನೇ ಮಾಡಿದರೂ ಎಲ್ಲಾ ಕೆಲಸಗಳೂ ಈ ಪ್ರೋಗ್ರಾಮ್ ಮೂಲಕವೇ ಆಗುತ್ತವೆ.
ಕಂಪ್ಯೂಟರ್ಗೆ ಏನು ಮಾಡಬೇಕೆಂದು ಕೋಡಿಂಗ್ ಮೂಲಕ ತಿಳಿಸಲಾಗುತ್ತದೆ.
ಅಂದರೆ, ಕಂಪ್ಯೂಟರ್ ಅರ್ಥಮಾಡಿಕೊಳ್ಳುವ ಭಾಷೆಯನ್ನು ಕೋಡಿಂಗ್ ಎಂದು ಕರೆಯಲಾಗುತ್ತದೆ. ಹೇಗೆ ಕಣ್ಣು ಕಾಣಿಸದೇ ಇರುವವರು ಓದಲು ಬ್ರೈಲ್ ಲಿಪಿ ಇದೆಯೋ ಹಾಗೆ.
ನಿಮಗೆ ಕೋಡಿಂಗ್ ಭಾಷೆ ತಿಳಿದಿದ್ದರೆ ನೀವು ಸುಲಭವಾಗಿ ವೆಬ್ಸೈಟ್ಗಳು ಅಥವಾ ಅಪ್ಲಿಕೇಶನ್ಗಳನ್ನು ರಚಿಸಬಹುದು.
ಇದಲ್ಲದೆ, ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್| Artificial Intelligence)) ಮತ್ತು ರೊಬೊಟಿಕ್ಸ್ನಂತಹ ದೊಡ್ಡ ಅಪ್ಲಿಕೇಶನ್ಗಳನ್ನೂ ಡೆವೆಲೆಪ್ ಮಾಡಬಹುದು.
ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನಲ್ಲಿಯ ವಿಧಗಳು (Types of Programming Languages)
ಸಾಫ್ಟ್ವೇರ್ ಕ್ಷೇತ್ರದಲ್ಲಿ ಎರಡು ವಿಧವಾದ ಭಾಷೆಗಳು (ಲ್ಯಾಂಗ್ವೇಜ್) ಇವೆ.
‘ಹೈ ಲೆವೆಲ್ ಪ್ರೊಪಿಗ್ರಾಮಿಂಗ್ ಲ್ಯಾಂಗ್ವೇಜ್‘ (High Level Programming Language) ಮತ್ತು ‘ಮಷೀನ್ ಲೆವೆಲ್ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‘ (Machine Level Programming Language).
ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಹೈ ಲೆವೆಲ್ ಪ್ರೊಪಿಗ್ರಾಮಿಂಗ್ ಲ್ಯಾಂಗ್ವೇಜ್ ಇದು ಕೋಡ್ ಮಾಡುವ ಮನುಷ್ಯರಿಗೆ ಅರ್ಥವಾಗುವ ಭಾಷೆ.ಉದಾಹರಣೆಗೆ : ಜಾವಾ (Java) , C ++ ಮುಂತಾದವು.
ಮಷೀನ್ ಲೆವೆಲ್ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಇದು ಕಂಪ್ಯೂಟರ್ ಗೆ ಮಾತ್ರ ಅರ್ಥವಾಗುತ್ತದೆ. ಉದಾಹರಣೆಗೆ: ಒಂದು ಕಮಾಂಡ್.. ‘10011110011’.

ಕಂಪೈಲರ್ (compiler) ಅನ್ನುವ ಒಂದು ಪ್ರೋಗ್ರಾಮ್ ಈ ಹೈ ಲೆವೆಲ್ ಪ್ರೊಪಿಗ್ರಾಮಿಂಗ್ ಲ್ಯಾಂಗ್ವೇಜ್ ನ ಕಮಾಂಡ್ ಅನ್ನು ಮಷೀನ್ ಲೆವೆಲ್ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಗೆ ಪರಿವರ್ತಿಸುತ್ತದೆ.
ಪ್ರಸ್ತುತ ನಾವು ಬರಿ ಹೈ ಲೆವೆಲ್ ಪ್ರೊಪಿಗ್ರಾಮಿಂಗ್ ಲ್ಯಾಂಗ್ವೇಜ್ ಬಗ್ಗೆ ತಿಳಿಯೋಣ.
ಅನೇಕ ಪ್ರೋಗ್ರಾಮಿಂಗ್ ಭಾಷೆಗಳಿವೆ, ಕೆಲವು ವೆಬ್ ಅಭಿವೃದ್ಧಿಗೆ (Web development) ಬಳಸಲ್ಪಡುತ್ತವೆ ಮತ್ತು ಕೆಲವು Android ಅಪ್ಲಿಕೇಶನ್ ಅಭಿವೃದ್ಧಿಗೆ ಬಳಸಲ್ಪಡುತ್ತವೆ.
ಹೆಚ್ಚು ಬಳಸಬಹುದಾದ ಕೆಲವು ಕೋಡಿಂಗ್ ಭಾಷೆಗಳು.
- ಜಾವಾ (Java)
- ಪೈಥಾನ್ (Python)
- C
- C++
- ಜಾವಾ ಸ್ಕ್ರಿಪ್ಟ್ (Java Script)
- HTML
- CSS
- PHP
- MySQL
- .NET
- ರೂಬಿ (RUBY)
ಕೋಡಿಂಗ್ ಕಲಿಯುವುದು ಹೇಗೆ? (How to Learn Coding)
ಸ್ನೇಹಿತರೇ, ಕೋಡಿಂಗ್ ಎಂದರೇನು ಎಂದು ನಿಮಗೆ ಈಗ ಗೊತ್ತಾಯ್ತು.
ನಿಮ್ಮ ಆಸಕ್ತಿಯು ಕಂಪ್ಯೂಟರ್ನಲ್ಲಿದ್ದರೆ ಮತ್ತು ನೀವು ಕೋಡಿಂಗ್ ಅಥವಾ ಪ್ರೋಗ್ರಾಮಿಂಗ್ ಕಲಿಯಲು ಬಯಸಿದರೆ, ನೀವು ಹೇಗೆ ಕಲಿಯಬಹುದು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.
ಕೋಡಿಂಗ್ ಕಲಿಯಲು, ಮೊದಲು ನೀವು ಮೂಲಭೂತ ವಿಷಯಗಳೊಂದಿಗೆ ಪ್ರಾರಂಭಿಸಬೇಕು.
ಕೋಡಿಂಗ್ ಅಥವಾ ಪ್ರೋಗ್ರಾಮಿಂಗ್ ಮಾಡಲು, ನೀವು ಸಾಫ್ಟ್ವೇರ್ ಇಂಜಿನಿಯರ್ ಪದವಿಯನ್ನು ಹೊಂದಿರಬೇಕು, ನೀವು ಪದವಿ ಹೊಂದಿಲ್ಲದಿದ್ದರೆ ಪರವಾಗಿಲ್ಲ, ನೀವು ಮಾಡಬಹುದು. ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಪ್ರೋಗ್ರಾಮಿಂಗ್ ಕಲಿಯಿರಿ.
ಪ್ರೋಗ್ರಾಮಿಂಗ್ ಅಥವಾ ಕೋಡಿಂಗ್
ನಿಮಗೆ ಸಾಧಿಸುವ ಹೆಬ್ಬಯಕೆ ಇದ್ದರೆ ,ಪ್ರೋಗ್ರಾಮಿಂಗ್ ಅಥವಾ ಕೋಡಿಂಗ್ ಕಲಿಯಲು ನೀವು ತುಂಬಾ ಕಷ್ಟಪಡಬೇಕಾಗಿಲ್ಲ.
ಅಂದಹಾಗೆ, ನಾವು ಯಾವುದನ್ನಾದರೂ ಚೆನ್ನಾಗಿ ಕಲಿಯಲು ಬಯಸಿದರೆ, ಅದಕ್ಕಾಗಿ ನಾವು ಅದನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು ಮತ್ತು ಕೋಡಿಂಗ್ನಲ್ಲಿಯೂ ಇದೇ ರೀತಿಯದ್ದನ್ನು ಮಾಡಬೇಕು ಎಂದು ನೀವು ತಿಳಿದಿರಬೇಕು.
ಸ್ನೇಹಿತರೇ, ನೀವು ಕೋಡಿಂಗ್ ಮಾಡಲು ಸಲ್ಪ ಮಟ್ಟಿನ ಇಂಗ್ಲಿಷ್ ಸಹ ತಿಳಿದಿರಬೇಕು, ಅಂದರೆ ನೀವು ಇಂಗ್ಲಿಷ್ ಅನ್ನು ಅರ್ಥಮಾಡಿಕೊಳ್ಳಬೇಕು ಅಂದರೆ ಮಾತ್ರ ನೀವು ಕೋಡಿಂಗ್ ಕಲಿಯಬಹುದು.
ಏಕೆಂದರೆ ಅದರಲ್ಲಿ ಹೆಚ್ಚಿನ ಇಂಗ್ಲಿಷ್ ಪದಗಳನ್ನು ಬಳಸಲಾಗುತ್ತದೆ ಮತ್ತು ಎಲ್ಲಾ ವಿಷಯಗಳನ್ನು ಇಂಗ್ಲಿಷ್ನಲ್ಲಿ ಕೋಡ್ ಮಾಡಬೇಕು.
ಕೋಡಿಂಗ್ ಕಲಿಯಲು, ನೀವು ಕಂಪ್ಯೂಟರ್ ಪ್ರೋಗ್ರಾಮಿಂಗ್ಗಾಗಿ C++ ಮತ್ತು ವೆಬ್ ಅಭಿವೃದ್ಧಿಗಾಗಿ HTML ನಂತಹ ಮೂಲಭೂತ ವಿಷಯಗಳನ್ನು ಕಲಿಯಬೇಕು.
ಇಲ್ಲದಿದ್ದರ ಇವತ್ತಿನ ದಿನಗಳಲ್ಲಿ ಪೈಥಾನ್ (Python) ಹೆಚ್ಚು ಉಪಯೋಗ ಮಾಡುತ್ತಿದ್ದಾರೆ. ಅದು ಕಲಿಯಲು ಸುಲಭ ಕೂಡ.
ಕೋಡಿಂಗ್ ಅನ್ನು ಆಫ್ಲೈನ್ ಮತ್ತು ಆನ್ಲೈನ್ ಮುಖಾಂತರ ಕಲಿಯಬಹುದು.
ಆಫ್ಲೈನ್ ಕೋಡಿಂಗ್ ಕಲಿಯುವುದು ಹೇಗೆ? (How to Lean Coding Offline)
ಆಫ್ಲೈನ್ನಲ್ಲಿ ಕೋಡಿಂಗ್ ಕಲಿಯಲು, ನೀವು ಪ್ರೋಗ್ರಾಮಿಂಗ್ ಕಲಿಸುವ ಕೋಚಿಂಗ್ ಕ್ಲಾಸ್ಗೆ ಹೋಗಬಹುದು ಮತ್ತು ಪ್ರೋಗ್ರಾಮಿಂಗ್ ಪುಸ್ತಕದಿಂದ ಕೋಡಿಂಗ್ ಕಲಿಯಬಹುದು, ನಿಮಗೆ ತರಬೇತಿಯ ಬಗ್ಗೆ ತಿಳಿದಿಲ್ಲದಿದ್ದರೆ, ನೀವು ಸ್ನೇಹಿತರ ಸಹಾಯವನ್ನು ತೆಗೆದುಕೊಳ್ಳಬಹುದು ಅಥವಾ Google ನೀವು ಹುಡುಕಬಹುದು.
Google ನಲ್ಲಿ ನೀವಿರುವ ಸ್ಥಳದ ಹತ್ತಿರ ಯಾವುದಾದರು ಕೋಚಿಂಗ್ ಕ್ಲಾಸೆಸ್ ಇವೆನಾ ತಿಳಿದುಕೊಂಡು ಅವರನ್ನು ಸಂಪರ್ಕಿಸಿರಿ.
ಆನ್ಲೈನ್ನಲ್ಲಿ ಕೋಡಿಂಗ್ ಕಲಿಯುವುದು ಹೇಗೆ? (How to Lean Coding Online)
ಆನ್ಲೈನ್ನಲ್ಲಿ ಕೋಡಿಂಗ್ ಕಲಿಯಲು ಹಲವು ವೆಬ್ಸೈಟ್ಗಳಿವೆ, ಅವುಗಳಿಂದ ನೀವು ಕೋಡಿಂಗ್ ಕಲಿಯಬಹುದು.
ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಅನ್ನು ಉಚಿತವಾಗಿ ಕಲಿಸುವ ಹಲವಾರು ವೆಬ್ಸೈಟ್ಗಳಿವೆ ಮತ್ತು ಇನ್ನೂ ಹಲವು ಫಿ (Paid web sites)ಕೊಟ್ಟು ಕಲಿಯುವ ವೆಬ್ಸೈಟ್ ಗಳಿವೆ.
ಉದಾ. w3schools.com ಮತ್ತು tutorialspoint.com
ಕೋಡಿಂಗ್ ಕಲಿಯಲು ವೆಬ್ಸೈಟ್
freecodecamp.org
codewars.com
geeksofgeek.org
Youtubeನಲ್ಲೂ ಅನೇಕ ಚಾನೆಲ್ ಗಳಿವೆ. ಹೆಚ್ಚಿನವು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಕಲಿಸುವ ಚಾನೆಲ್ಗಳಿವೆ.
ಸ್ನೇಹಿತರೇ, ಈಗ ನೀವು ಕೋಡಿಂಗ್ ಅಂದರೆ ಏನು, ಪ್ರೋಗ್ರಾಮಿಂಗ್ ನ ವಿಧಗಳು, ಹೇಗೆ ಕಲಿಯಬಹುದು ಎಂದು ತಿಳಿದು ಕೊಂಡಿರಿ.
ನಿಮಗೆ ಅರ್ಥವಾಗದ ಯಾವುದಾದರೂ ವಿಷಯವಿದ್ದರೆ ಅಥವಾ ನಮ್ಮಿಂದ ಏನನ್ನಾದರೂ ಕೇಳಲು ನೀವು ಬಯಸಿದರೆ, ನೀವು ಕೆಳಗಿನ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮನ್ನು ಕೇಳಬಹುದು.
ಸಾರಾಂಶ (Summary):
ಕೋಡಿಂಗ್ ಅನ್ನು ಪ್ರೋಗ್ರಾಮಿಂಗ್ ಎಂದೂ ಕರೆಯುತ್ತಾರೆ. ನಾವು ಕಂಪ್ಯೂಟರಿನಲ್ಲಿ ಏನೇ ಮಾಡಿದರೂ ಎಲ್ಲಾ ಕೆಲಸಗಳೂ ಈ ಪ್ರೋಗ್ರಾಮ್ ಮೂಲಕವೇ ಆಗುತ್ತವೆ. ಕಂಪ್ಯೂಟರ್ಗೆ ಏನು ಮಾಡಬೇಕೆಂದು ಕೋಡಿಂಗ್ ಮೂಲಕ ತಿಳಿಸಲಾಗುತ್ತದೆ. ‘ಹೈ ಲೆವೆಲ್ ಪ್ರೊಪಿಗ್ರಾಮಿಂಗ್ ಲ್ಯಾಂಗ್ವೇಜ್’ ಮತ್ತು ‘ಮಷೀನ್ ಲೆವೆಲ್ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್’ ಎಂದು ಎರಡು ತರಹದ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಗಳಿವೆ.
ಪ್ರೋಗ್ರಾಮಿಂಗ್ ಅನ್ನು ಆನ್ಲೈನ್ ಅಥವಾ ಆಫ್ ಲೈನ್ ನಲ್ಲಿ ಕಲಿಯಬಹುದು.
ಈ ಬರಹ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿರಿ. ಅವರಿಗೂ ಹೆಲ್ಪ್ ಆಗ ಬಹುದು ಅಲ್ಲವಾ?
